Verslas ir karjera: kanadų
Verslas ir karjera: darbas, pokalbiai dėl darbo, pinigai ir biuro kalba. Skaityk ir klausyk kalba kanadų savo lygiu, nuo Pradedantysis–Mokėjimas, su garsu, vertimu ir viktorinomis.
Pamokos (kanadų) tema „Verslas ir karjera“
Naujienos
Žiūrėti visus 4
Verslas ir karjeraVidutinisಹೊಸದುರ್ಗ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊಸದುರ್ಗ: ಆತ್ಮ (ಎಟಿಎಂಎ) ಯೋಜನೆಯಡಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳ ಆಯ್ಕೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆ. 30 ಅರ್ಜಿ ಸಲ್ಲಿಸಲು ಕೊನೆಯ ದಿನ.
Verslas ir karjeraVidutinisಸೊಳ್ಳೆ ನಿಯಂತ್ರಣಕ್ಕೆ ಕರೆಯಲಾದ ಟೆಂಡರ್ ರದ್ದು ಕೋರಿ ಅರ್ಜಿ; ಜಿಬಿಎಗೆ ಹೈಕೋರ್ಟ್ ನೋಟಿಸ್
ಬೆಂಗಳೂರು : ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕರೆಯಲಾಗಿರುವ ಟೆಂಡರ್ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಗ್ರೇಟರ್ ಬೆಂಗಳೂರು ಸೊಳ್ಳೆ ನಿಯಂತ್ರಣ ಗುತ್ತಿಗೆದಾರರ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಜಿಬಿಎ ಮುಖ್ಯ ಆಯುಕ್ತರು, ಪಶ್ಚಿಮ ಪಾಲಿಕೆ, ಕೇಂದ್ರ ಪಾಲಿಕೆ, ಉತ್ತರ ಪಾಲಿಕೆ, ದಕ್ಷಿಣ ಪಾಲಿಕೆ, ಜಿಬಿಎ ವಿಶೇಷ ಆಯುಕ್ತ (ಆರೋಗ್ಯ), ಜಿಬಿಎ ಮುಖ್ಯ ಅರೋಗ್ಯಾಧಿಕಾರಿ ಹಾಗೂ ನಾಲ್ಕೂ ಪಾಲಿಕೆಗಳ ಆರೋಗ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ಅರ್ಜಿದಾರ ಸಂಘದ ಸದಸ್ಯರು ಬಿಬಿಎಂಪಿಯ ಮೃತ ಹಾಗೂ ನಿವೃತ್ತ ನೌಕರರ ಕುಟುಂಬದ ಸದಸ್ಯರಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸುವ ಸಂಬಂಧ 2013ರಲ್ಲಿ ಬಿಬಿಎಂಪಿ (ಜಿಬಿಎ) ನಿರ್ಣಯ ಕೈಗೊಂಡಿದೆ. ಅರ್ಜಿದಾರರ ಸಂಘದ ಕೆಲ ದೂರುಗಳಿದ್ದವು, ಅದನ್ನು ಆಧರಿಸಿ ಜಿಬಿಎ ವಿಶೇಷ ಆಯುಕ್ತರು (ಆರೋಗ್ಯ) 2026ರ ಜೂನ್ 15ರಂದು ಕೆಲವು ಶಿಫಾರಸುಗಳನ್ನು ಮಾಡಿ, ಟೆಂಡರ್ ಅಧಿಸೂಚನೆ ಹೊರಡಿಸುವ ಮೊದಲು ಈ ಶಿಫಾರಸುಗಳನ್ನು ಜಿಬಿಎ ಮುಖ್ಯ ಆಯುಕ್ತರ ಗಮನಕ್ಕೆ ತರಬೇಕು ಎಂದು ಹೇಳಿದ್ದರು. ಆದರೆ, ಅದನ್ನು ಪರಿಗಣಿಸದೆ, ಸೊಳ್ಳೆ ನಿಯಂತ್ರಣಕ್ಕೆ 2026 ಜುಲೈ 24ರಂದು ಟೆಂಡರ್ ಆಹ್ವಾನಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Verslas ir karjeraPradedantysisಪ್ರವಾದಿ ಮುಹಮ್ಮದ್ ಅವರ ಸಂದೇಶ ಇಡೀ ಮಾನವ ಕುಲಕ್ಕೆ ಅನ್ವಯ: ಮೌಲಾನಾ ಇಯಾಝ್ ಸಾಹೇಬ್
ಹುಮನಾಬಾದ್: ಪ್ರವಾದಿ ಮುಹಮ್ಮದ್ ಅವರ ಸಂದೇಶ ಬರೀ ಮುಸಲ್ಮಾನರಿಗಷ್ಟೇ ಅಲ್ಲ ಇಡೀ ಮಾನವ ಕುಲಕ್ಕೆ ಅನ್ವಯವಾಗುತ್ತವೆ ಎಂದು ಮುಂಬೈ ನ ಮೌಲಾನಾ ಇಯಾಝ್ ಸಾಹೇಬ್ ಅವರು ಹೇಳಿದರು. ತಾಲೂಕಿನ ದುಬಲಗುಂಡಿ ಗ್ರಾಮದ ಮದನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಮೀಲಾದುನ್ನೆಬಿ ಪ್ರಯುಕ್ತ ರವಿವಾರ ರಾತ್ರಿ ನಡೆದ ಸೀರತ್-ಎ-ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರವಾದಿ ಮುಹಮ್ಮದ್ ಅವರು ಇಡೀ ಮಾನವ ಕೂಲಕ್ಕೆ ಶಾಂತಿಧೂತರಾಗಿ ಬಂದಿದ್ದರು. ಅವರು ಶಾಂತಿಯ ಸಂಕೇತವಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಪ್ರವಾದಿ ಅವರ ಜೀವನದ ಕುರಿತು ಅವರ ಸರಳತೆ ಮನೋಭಾವನೆ ಹಾಗೂ ಸಮಾನತೆಯ ಸಂದೇಶ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿ ಗಮನ ಸೆಳೆದರು.� ಮೂರುವರೆ ವರ್ಷದ ಮಗು ಸೈಯದ್ ತೈಯಬ್ ಅಲಿ ನಮಾಝ್ ನಿರ್ವಹಿಸುವ ಮಾಡುವ ಮೂಲಕ ಗಮನ ಸೆಳೆದನು.� ಈ ಕಾರ್ಯಕ್ರಮದಲ್ಲಿ ಮುಫ್ತಿ ತೌಸೀಫ್ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಇಯಾಜ್ ಸಾಹೇಬ್, ಮೌಲಾನಾ ಸಲೀಮ್, ಖಾರಿ ತೈಯ್ಯಿಬ್, ಮುಫ್ತಿ ಅಸ್ಲಾಂ, ಮುಫ್ತಿ ರಿಹಾನ್, ಶಾಲೆಯ ಉಪಾಧ್ಯಕ್ಷ ಹಾಫಿಜ್ ಆಸೀಫ್ ಮೌಲಾನಾ, ಕಾರ್ಯದರ್ಶಿ ಶಾದುಲ್ಲಾ ಖಾನ್, ಪ್ರಮುಖರಾದ ಕರೀಂ ಮೌಲಾನಾ, ಅಕ್ಬರ್ ಮಾಸುಲ್ದಾರ್, ಸೈಯದ್ ಜಹಾಂಗೀರ್ ಹಾಗೂ ಹಿರಿಯರಾದ ಬಾಲೆಷಾ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
Istorijos
Žiūrėti visus 120Dialogai
Žiūrėti visus 120Trumpi pasakojimai
Žiūrėti visus 120ನಾನು ಮೊದಲ ಬಾರಿಗೆ ಸಭೆ ನಡೆಸಿದ್ದು
ನನ್ನ ವಾರಾಂತ್ಯದ ಯೋಜನೆ
ಕೆಲಸ ಕಳೆದುಕೊಂಡದ್ದು ನನ್ನ ಅಸ್ಮಿತೆಯ ಬಗ್ಗೆ ಮರುಚಿಂತನೆ ಮಾಡುವಂತೆ ಹೇಗೆ ಪ್ರೇರೇಪಿಸಿತು
ಕಾರ್ಯವನ್ನು ವಹಿಸುವುದರ ಬಗ್ಗೆ ನನ್ನ ಅನಾನುಕೂಲತೆಯನ್ನು ಎದುರಿಸುವುದು
Podkastai
Žiūrėti visus 12Verslas ir karjera
ನಲವತ್ತರ ವಯಸ್ಸಿನಲ್ಲಿ ವೃತ್ತಿ ಬದಲಾವಣೆ
ಕವಿತಾ ಹದಿನೈದು ವರ್ಷಗಳ ಲೆಕ್ಕಪರಿಶೋಧನೆ ವೃತ್ತಿಯನ್ನು ಬಿಟ್ಟು ನಲವತ್ತರ ವಯಸ್ಸಿನಲ್ಲಿ ದಾದಿಯಾದಳು. ರಾಜ್ ಮತ್ತು ದಿವ್ಯ ವೃತ್ತಿಜೀವನದ ಮಧ್ಯದಲ್ಲಿ ದಿಕ್ಕು ಬದಲಾಯಿಸಲು ಏನು ಬೇಕು ಮತ್ತು ಅದು ಏಕೆ ತಡವಾಗಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಾರೆ.
Verslas ir karjera
ಸಂಬಳ ಹೆಚ್ಚಳ ಕೇಳುವುದು
ರಾಜ್ ಮತ್ತು ದಿವ್ಯ ತಮ್ಮ ಬಾಸ್‌ಗಳ ಬಳಿ ಸಂಬಳ ಹೆಚ್ಚಳ ಕೇಳಿದ ತಮ್ಮ ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಕಷ್ಟದ ಮಾತುಕತೆಗೆ ಸರಳ ಮತ್ತು ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತಾರೆ.
Verslas ir karjera
ಕೆಲಸದಲ್ಲಿ ಬರ್ನ್‌ಔಟ್
ರಾಜ್ ತನ್ನ ಕೊನೆಯ ವರ್ಷಗಳ ಶಿಕ್ಷಣ ವೃತ್ತಿಯಲ್ಲಿ ಅನುಭವಿಸಿದ ಬರ್ನ್‌ಔಟ್ ಬಗ್ಗೆ ಮಾತನಾಡುತ್ತಾನೆ, ಮತ್ತು ಅದು ಒಳಗಿನಿಂದ ಹೇಗಿತ್ತು ಎಂಬುದನ್ನು ವಿವರಿಸುತ್ತಾನೆ. ಅವನು ಮತ್ತು ದಿವ್ಯ ಬರ್ನ್‌ಔಟ್‌ನ ಎಚ್ಚರಿಕೆಯ ಸಂಕೇತಗಳು ಮತ್ತು ಕಾರ್ಯಸ್ಥಳಗಳು ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸುತ್ತಾರೆ.
Vaizdo įrašai
Žiūrėti visus 17
Vidutinis8:01₹8,999/- HP ProBook Second Hand Laptop 🔥 ಕಮ್ಮಿ ಬೆಲೆಗೆ ಲ್ಯಾಪ್ ಟಾಪ್
Needs Of Public
Pradinis4:44I found the Best Engineering College for 2025🥹 | KCET Polaris School of Technology |
Darshan Gowda
Mokėjimas26:3010 ನಿಮಿಷದಲ್ಲಿ ಎಲ್ಲಾ ಬಟ್ಟೆ ಫಳ ಫಳ ಗುರು..! ಭರ್ಜರಿ ಆಫರ್ | Lowest price washing machine in India 2024
Needs Of Public